Index   ವಚನ - 793    Search  
 
ಇನ್ನು ಮುಂದೆ ಅನುಭಾವದ ವಚನ ಅದೆಂತೆಂದಡೆ: ಜಾಗ್ರ ಸ್ವಪ್ನಸುಷುಪ್ತಿಯೆಂಬ ಮೂರವಸ್ಥೆಯು ಅನಂತ ಭವದುಃಖಂಗಳ ತಹವು. ಈ ಮೂರು ಅವಸ್ಥೆಯ ಕೆಡೆಮೆಟ್ಟಿ ಸಾಕ್ಷಿಯಾಗಿಹ ತೂರ್ಯಬೋಧೆಯ ಕಂಡವರ ಘನವನೇನೆಂದುಪಮಿಸುವೆ ನೋಡಾ, ಅಪ್ರಮಾಣಕೂಡಲಸಂಗಮದೇವಾ.