Index   ವಚನ - 805    Search  
 
ಶ್ಲೋಕದೊಳಗಣ ಅರ್ಥದಂತಿದ್ದುದು, ಫಲದೊಳಗಣ ರುಚಿಯಂತಿದ್ದುದು, ಕ್ಷೀರದೊಳಗಣ ಘೃತದಂತಿದ್ದುದು ನೋಡಾ ಮಹಾಘನದಲ್ಲಿ ಲೀಯವಾದ ಶರಣನ ನಿಲವು, ಅಪ್ರಮಾಣಕೂಡಲಸಂಗಮದೇವಾ.