Index   ವಚನ - 804    Search  
 
ಆ ವ್ಯೋಮಾತೀತವೆಂಬ ಮಹಾಘನದಲ್ಲಿ ಲೀಯವಾದ ಶರಣನ ನಿಲವದೆಂತೆಂದಡೆ: ರವಿಯೊಳಗಣ ಬಿಂಬದಂತಿದ್ದುದು, ದರ್ಪಣದೊಳಗಣ ಪ್ರತಿಬಿಂಬದಂತಿದ್ದುದು, ಪುಷ್ಪದೊಳಗಣ ಪರಿಮಳದಂತಿದ್ದುದು, ಜ್ಯೋತಿಯೊಳಗಣ ಕರ್ಪುರದಂತಿದ್ದುದು ನೋಡಾ ಮಹಾಘನದಲ್ಲಿ ಲೀಯವಾದ ಶರಣನ ನಿಲವು ಅಪ್ರಮಾಣಕೂಡಲಸಂಗಮದೇವಾ.