Index   ವಚನ - 810    Search  
 
ಬಿಂದುವಾಗಿದ್ದು ಅಲ್ಲದೆ ನಾದವಾಗಿಹ ಘನವನಾರೂ ಅರಿಯರು. ನಾದವಾಗಿದ್ದು ಅಲ್ಲದೆ ಕಲೆಯಾಗಿಹ ಘನವನಾರೂ ಅರಿಯರು. ನಾದಬಿಂದುಕಲೆಯಾಗಿ ಅಲ್ಲದೆ ನಾದಬಿಂದುಕಲಾತೀತವಾಗಿಹ ಘನವನಾರೂ ಅರಿಯರು ನಾದಬಿಂದುಕಲಾತೀತವಾಗಿಹ ಘನವ ಮೀರಿ ಅತ್ತತ್ತವಾಗಿಹ ಮಹಾಘನವನಾರೂ ಅರಿಯರು ಅಪ್ರಮಾಣಕೂಡಲಸಂಗಮದೇವಾ.