Index   ವಚನ - 811    Search  
 
ವೇದಾಗಮ ಪುರಾಣಂಗಳನೋದಿ ಕಂಡೆನೆಂಬ ಭ್ರಾಂತರ ನೋಡಾ. ವೇದಂಗಳನೋದಿ ಕಾಣದೆ ವೇದಾತೀತನೆಂದುದು ನೋಡಾ. ಆಗಮಂಗಳನೋದಿ ಕಾಣದೆ ಆಗಮಾತೀತನೆಂದುದು ನೋಡಾ. ಶಾಸ್ತ್ರಂಗಳನೋದಿ ಕಾಣದೆ ಶಾಸ್ತ್ರಾತೀತನೆಂದುದು ನೋಡಾ. ಪುರಾಣಂಗಳನೋದಿ ಕಾಣದೆ ಪುರಾಣಾತೀತನೆಂದುದು ನೋಡಾ. ಉಪನಿಷತ್ತುಗಳನೋದಿ ಕಾಣದೆ ಉಪಮಾತೀತನೆಂದುದು ನೋಡಾ. ಆ ಉಪಮಾತೀತವೆಂಬ ಮಹಾಘನವ ನಮ್ಮ ಅಪ್ರಮಾಣಕೂಡಲಸಂಗನ ಶರಣರು ಬಲ್ಲರು.