Index   ವಚನ - 814    Search  
 
ದೇಹವಳಿದು ಜೀವವಳಿದು ಮನವಳಿದು ಅರಿವಳಿದು, ತಾನೆಂಬ ಪರವಳಿದು, ಪೃಥ್ವಿ ಅಪ್ಪು ತೇಜ ವಾಯು ಆಕಾಶವಳಿದು, ತೂರ್ಯ ತೂರ್ಯಾತೀತವಳಿದು, ವ್ಯೋಮವಳಿದು ವ್ಯೋಮಾತೀತಕತ್ತತ್ತವಾಗಿಹ ಅಪ್ರಮಾಣಕೂಡಲಸಂಗಯ್ಯನಲ್ಲಿ ಲೀಯವಾದ ಮಹಾಶರಣನ ನಿಲವಿಂಗೆ ನಮೋ ನಮೋ ಎನುತಿರ್ದೆನು.