Index   ವಚನ - 816    Search  
 
ಹೆಣ್ಣೆಂಬೆನೆ ಹೆಣ್ಣಲ್ಲ, ಗಂಡೆಂಬೆನೆ ಗಂಡಲ್ಲ, ನಪುಂಸಕನೆಂಬೆನೆ ನಪುಂಸಕನಲ್ಲ ನೋಡಾ. ಏನೂ ಅಲ್ಲದ ನಿರಾಮಯಾತೀತದಲ್ಲಿ ಲೀಯವಾದ ಶರಣಂಗೆ ನಿರಾಮಯಾತೀತವಾಗಿಹುದು ನೋಡಾ ಜನನವು ಅಪ್ರಮಾಣಕೂಡಲಸಂಗಮದೇವಾ.