Index   ವಚನ - 824    Search  
 
ನಿರಾಮಯದೊಳು ನಿರಾಳಮಯವಾಗಿ ಹುಟ್ಟಿತ್ತು ನೋಡಾ ಒಂದು ಹೃತ್ಕಮಲಕರ್ಣಿಕೆ. ಆ ಹೃತ್ಕಮಲಕರ್ಣಿಕೆ ಹನ್ನೆರಡೆಸಳಾಗಿಹುದು. ಎಂಟೆಸಳೆ ಅಧೋಮುಖವಾಗಿಹುದು, ನಾಲ್ಕೆಸಳೆ ಊರ್ಧ್ವಮುಖವಾಗಿಹುದು. ಅಧೋಮುಖವಾಗಿಹ ನಾಲ್ಕೆಸಳೆ ಕರ್ಣಿಕೆಯೆ ಅಷ್ಟದಳಕಮಲ, ಊರ್ಧ್ವಮುಖವಾಗಿಹ ನಾಲ್ಕೆಸಳ ಕರ್ಣಿಕೆಯೆ ಚೌಕಮಧ್ಯ, ಆ ಎಂಟೆಸಳ ಕರ್ಣಿಕೆಯ ಸದ್ವಾಸನೆಯೆ ಜೀವಾತ್ಮನು, ಆ ನಾಲ್ಕೆಸಳ ಕರ್ಣಿಕೆಯ ಸದ್ವಾಸನೆಯೆ ಪರಮಾತ್ಮನು, ಈ ಜೀವ ಪರಮರಿಬ್ಬರನು ಬೆರಸಿ ಒಂದಾಗದೆ ಬಿಚ್ಚಿ ಬೇರಾಗದೆ ನಿಲ್ಲಬಲ್ಲಾತನು ಪರಮಯೋಗಿ ನೋಡಾ ಅಪ್ರಮಾಣಕೂಡಲಸಂಗಮದೇವಾ.