Index   ವಚನ - 823    Search  
 
ಕುಂಡಲೀಶಕ್ತಿಯ ಬಾಯಲ್ಲಿ ಮೂರು ಮಾತ್ರೆ ಹುಟ್ಟಿತ್ತು ನೋಡಾ. ಒಂದು ಮಾತ್ರೆ ಆರು ಮಾತ್ರೆಯಾಯಿತ್ತು. ಒಂದು ಮಾತ್ರೆ ನಾಲ್ಕು ಮಾತ್ರೆಯಾಯಿತ್ತು. ಒಂದು ಮಾತ್ರೆ ಆರು ಮಾತ್ರೆಯಾಯಿತ್ತು. ಈ ಹನ್ನೆರಡು ನಾಲ್ಕು ಹದಿನಾರು ಮಾತ್ರೆಗಳಾದವು. ಈ ಹದಿನಾರು ಹದಿನಾರು ಮೂವತ್ತೆರಡು ಮಾತ್ರೆಗಳಾದವು. ಈ ಮೂವತ್ತೆರಡು ಮೂವತ್ತೆರಡು ಅರುವತ್ತುನಾಲ್ಕು ಮಾತ್ರೆಗಳಾದವು. ಈ ಭೇದವ ಬಲ್ಲಾತನೆ ಶಿವಯೋಗಿ ಲಿಂಗಾನುಭಾವಿ ಎಂಬೆ ನೋಡಾ ಅಪ್ರಮಾಣಕೂಡಲಸಂಗಮದೇವಾ.