Index   ವಚನ - 825    Search  
 
ನಿರಾಮಯದೊಳು ಹುಟ್ಟಿತ್ತು ನೋಡಾ ಒಂದು ಪದ್ಮ. ಸೂರ್ಯಚಂದ್ರಾಗ್ನಿಪ್ರಕಾಶವಾಗಿ ಆ ಪದ್ಮ ಹನ್ನೆರಡೆಸಳಾಗಿಹುದು. ಎಂಟೆಸಳೆ ಅಧೋಮುಖವಾಗಿಹುದು, ಅದು ಅಷ್ಟದಳಕಮಲ. ನಾಲ್ಕೆಸಳೆ ಊರ್ಧ್ವಮುಖವಾಗಿಹುದು, ಅದು ಚೌಕಮಧ್ಯ. ಎಂಟೆಸಳ ಸಂಯೋಗವೆ ನಿರಾಳಪ್ರಣವಪೀಠ. ಆ ಪುಷ್ಪಸದ್ವಾಸನೆ ತಾನೆ ನಮ್ಮ ಅಪ್ರಮಾಣಕೂಡಲಸಂಗಮದೇವ.