ನಿರಾಮಯದೊಳು ನಿರಾಳಮಯವಾಗಿ ಹುಟ್ಟಿತ್ತು ನೋಡಾ
ಒಂದು ಹೃತ್ಕಮಲಕರ್ಣಿಕೆ.
ಆ ಹೃತ್ಕಮಲಕರ್ಣಿಕೆ ಹನ್ನೆರಡೆಸಳಾಗಿಹುದು.
ಎಂಟೆಸಳೆ ಅಧೋಮುಖವಾಗಿಹುದು,
ನಾಲ್ಕೆಸಳೆ ಊರ್ಧ್ವಮುಖವಾಗಿಹುದು.
ಅಧೋಮುಖವಾಗಿಹ ನಾಲ್ಕೆಸಳೆ ಕರ್ಣಿಕೆಯೆ ಅಷ್ಟದಳಕಮಲ,
ಊರ್ಧ್ವಮುಖವಾಗಿಹ ನಾಲ್ಕೆಸಳ ಕರ್ಣಿಕೆಯೆ ಚೌಕಮಧ್ಯ,
ಆ ಎಂಟೆಸಳ ಕರ್ಣಿಕೆಯ ಸದ್ವಾಸನೆಯೆ ಜೀವಾತ್ಮನು,
ಆ ನಾಲ್ಕೆಸಳ ಕರ್ಣಿಕೆಯ ಸದ್ವಾಸನೆಯೆ ಪರಮಾತ್ಮನು,
ಈ ಜೀವ ಪರಮರಿಬ್ಬರನು ಬೆರಸಿ ಒಂದಾಗದೆ ಬಿಚ್ಚಿ ಬೇರಾಗದೆ
ನಿಲ್ಲಬಲ್ಲಾತನು ಪರಮಯೋಗಿ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Nirāmayadoḷu nirāḷamayavāgi huṭṭittu nōḍā
ondu hr̥tkamalakarṇike.
Ā hr̥tkamalakarṇike hanneraḍesaḷāgihudu.
Eṇṭesaḷe adhōmukhavāgihudu,
nālkesaḷe ūrdhvamukhavāgihudu.
Adhōmukhavāgiha nālkesaḷe karṇikeye aṣṭadaḷakamala,
ūrdhvamukhavāgiha nālkesaḷa karṇikeye caukamadhya,
ā eṇṭesaḷa karṇikeya sadvāsaneye jīvātmanu,
ā nālkesaḷa karṇikeya sadvāsaneye paramātmanu,
ī jīva paramaribbaranu berasi ondāgade bicci bērāgade
nillaballātanu paramayōgi nōḍā
apramāṇakūḍalasaṅgamadēvā.