Index   ವಚನ - 826    Search  
 
ನಿರಾಳ ಅಷ್ಟದಳಕಮಲದೊಳು ನಿರಂಜನ ಚೌಕಮಧ್ಯ ನಾಲ್ಕೆಸಳ ನೋಡಾ. ಅದರ ಬೀಜಾಕ್ಷರಭೇದವನಾರು ಬಲ್ಲರು? ನಿರಂಜನಪ್ರಣವ ಅವಾಚ್ಯಪ್ರಣವ ಕಲಾಪ್ರಣವ ಅನಾದಿಪ್ರಣವ ಅಕಾರಪ್ರಣವ ಉಕಾರಪ್ರಣವ ಮಕಾರಪ್ರಣವ ಆದಿಪ್ರಣವ ಅಖಂಡ ಗೋಳಕಾಕಾರಪ್ರಣವ ಮಕಾರಪ್ರಣವ ಆದಿಪ್ರಣವ ಅಖಂಡ ಮಹಾಜ್ಯೋತಿಪ್ರಣವ ನಿರಾಳ ಅಷ್ಟದಳಕಮಲ ನಿರಂಜನ ಚೌಕಮಧ್ಯದ ಬೀಜಾಕ್ಷರದ ಭೇದವ ನಿಜಲಿಂಗೈಕ್ಯರು ಬಲ್ಲರಲ್ಲದೆ ಮಿಕ್ಕಿನ ವೇಷಧಾರಿಗಳೆತ್ತ ಬಲ್ಲರಯ್ಯಾ ಅಪ್ರಮಾಣಕೂಡಲಸಂಗಮದೇವಾ.