ಕಾಲಿಲ್ಲದ ಗುರುವಿಂಗೆ ತಲೆಯಿಲ್ಲದ ಶಿಷ್ಯನು.
ತಲೆಯಿಲ್ಲದ ಶಿಷ್ಯಂಗೆ ಕಾಲಿಲ್ಲದ ಗುರು.
ಕಾಲಿಲ್ಲದ ಗುರುವನು ತಲೆಯಿಲ್ಲದ ಶಿಷ್ಯನರಿಯನು.
ತಲೆಯಿಲ್ಲದ ಶಿಷ್ಯನನು ಕಾಲಿಲ್ಲದ ಗುರುವರಿಯನು.
ಕಾಲಿಲ್ಲದ ಗುರುವ ತಲೆಯಿಲ್ಲದ ಶಿಷ್ಯನರಿದಡೆ
ಕಾಲಿಲ್ಲದ ಗುರು ಆ ತಲೆಯಿಲ್ಲದ ಶಿಷ್ಯನ
ನುಂಗಿತ್ತ ಕಂಡು ಬೆರಗಾದೆನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Kālillada guruviṅge taleyillada śiṣyanu.
Taleyillada śiṣyaṅge kālillada guru.
Kālillada guruvanu taleyillada śiṣyanariyanu.
Taleyillada śiṣyananu kālillada guruvariyanu.
Kālillada guruva taleyillada śiṣyanaridaḍe
kālillada guru ā taleyillada śiṣyana
nuṅgitta kaṇḍu beragādenu nōḍā
apramāṇakūḍalasaṅgamadēvā