Index   ವಚನ - 834    Search  
 
ನಾದವೆಂಬ ಕೆರೆಯೊಳಗೆ ಬಿಂದುವೆಂಬ ಅಮೃತವ ತುಂಬಿ, ಪಂಚೇಂದ್ರಿಯವೆಂಬ ಗದ್ದಿಗೆ ಕರಣಂಗಳೆಂಬ ಕಾಲುವೆಯ ತಿದ್ದಿ, ಜಾತಿ ವಿಜಾತಿಯೆಂಬ ಕೆಸರನುತ್ತು, ಪುಣ್ಯಪಾಪವೆಂಬ ಕಳೆಯ ಕಿತ್ತು. ಓಂ ನಮಃಶಿವಾಯವೆಂಬ ಬೀಜವ ಬಿತ್ತಿ, ಸ್ವಯಂಪ್ರಕಾಶವೆಂಬ ಅಗ್ಘವಣಿಯ ಕಟ್ಟಿ, ಪರಮಾನಂದವೆಂಬ ಬೆಳೆಯಾದವು. ಆಣವ ಮಾಯಾ ಕಾರ್ಮಿಕವೆಂಬ ಹಂದಿಯ ಹೊದ್ದಲೀಸದೆ ಹೆಡನೊತ್ತಿದೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.