Index   ವಚನ - 836    Search  
 
ಆವುದೊಂದು ರೂಪನು ಕಂಗಳು ಕಾಣವು. ಆವುದೊಂದು ಶಬ್ದವ ಕಿವಿಗಳು ಕೇಳವು. ಆವುದೊಂದು ಪರಿಣಾಮವ ಮನವರಿಯದು. ಆವುದೊಂದು ರುಚಿಯ ಜಿಹ್ವೆಯರಿಯದು. ಆವುದೊಂದು ಪರಿಮಳವ ನಾಸಿಕವರಿಯದು. ಆವುದೊಂದು ಸ್ಪರ್ಶನವ ತ್ವಕ್ಕರಿಯದು. ಎಲ್ಲರಲ್ಲಿಯ ಅರಿವ ಮಹಾಘನ ನಿರಾಳ ನಿರಂಜನ ನಿರಾಮಯ ನಿರಾಮಯಾತೀತವ ಆರೂ ಅರಿಯರು ಅಪ್ರಮಾಣಕೂಡಲಸಂಗಮದೇವಾ.