Index   ವಚನ - 835    Search  
 
ಕಾಲಿಲ್ಲದ ಗುರುವಿಂಗೆ ತಲೆಯಿಲ್ಲದ ಶಿಷ್ಯನು. ತಲೆಯಿಲ್ಲದ ಶಿಷ್ಯಂಗೆ ಕಾಲಿಲ್ಲದ ಗುರು. ಕಾಲಿಲ್ಲದ ಗುರುವನು ತಲೆಯಿಲ್ಲದ ಶಿಷ್ಯನರಿಯನು. ತಲೆಯಿಲ್ಲದ ಶಿಷ್ಯನನು ಕಾಲಿಲ್ಲದ ಗುರುವರಿಯನು. ಕಾಲಿಲ್ಲದ ಗುರುವ ತಲೆಯಿಲ್ಲದ ಶಿಷ್ಯನರಿದಡೆ ಕಾಲಿಲ್ಲದ ಗುರು ಆ ತಲೆಯಿಲ್ಲದ ಶಿಷ್ಯನ ನುಂಗಿತ್ತ ಕಂಡು ಬೆರಗಾದೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.