Index   ವಚನ - 837    Search  
 
ಶಿವನು ಐದಕ್ಷರವೆಂಬ ಅಣ್ಣಗಳು ನೀವು ಕೇಳಿರೆ, ಶಿವನು ಐದುವರ್ಣವೆಂಬ ಅಣ್ಣಗಳು ನೀವು ಕೇಳಿರೆ, ಶಿವನು ನಿರ್ಮಲನೆಂಬ ಅಣ್ಣಗಳು ನೀವು ಕೇಳಿರೆ, ಶಿವನು ನಿಃಕಲನೆಂಬ ಅಣ್ಣಗಳು ನೀವು ಕೇಳಿರೆ, ಶಿವನು ಐದಕ್ಷರವಲ್ಲ, ಐದುವರ್ಣವಲ್ಲ, ನಿರ್ಮಲವಲ್ಲ, ನಿಃಕಲನಲ್ಲ ನಿಃಕಲಾತೀತನು ನೋಡಾ ನಮ್ಮ ಅಪ್ರಮಾಣಕೂಡಲಸಂಗಮದೇವ.