Index   ವಚನ - 839    Search  
 
ತ್ರಿಪುರಂಗಳ ಕೆಡೆಮೆಟ್ಟಿ, ತೂರ್ಯ ತೂರ್ಯಾತೀತವ ದಾಂಟಿ, ವ್ಯೋಮಾತೀತಕತ್ತತ್ತವಾಗಿಹ ಮಹಾಘನದಲ್ಲಿ ನಿಂದ ಶರಣನು ಉದಯಾಸ್ತಮಾನವೆಂಬೆರಡರಿದ ಶಿವಯೋಗಿ ನೋಡಾ ಅಪ್ರಮಾಣಕೂಡಲಸಂಗಮದೇವಾ.