Index   ವಚನ - 840    Search  
 
ಮಹಾವಾಯುವ ಹಿಡಿದು ಮೂಲಜ್ವಾಲೆಯನೆಬ್ಬಿಸಿ, ಅಗ್ನಿಮಂಡಲ ಆದಿತ್ಯಮಂಡಲ ಚಂದ್ರಮಂಡಲವ ದಾಂಟಿ, ಹರಿವಿರಿಂಚಿಗಳರಿಯದ ಮಹಾಬಾಗಿಲ ತೆಗೆದು, ಮೇಲಣ ಬಯಲಾನಂದಮೃತವನುಂಡು, ನಿರ್ವಯಲಲ್ಲಿ ನಿಂದನು ನೋಡಾ ಅಪ್ರಮಾಣಕೂಡಲಸಂಗಮದೇವಾ.