Index   ವಚನ - 841    Search  
 
ಎಡಬಲನ ತಡೆದು, ಮೇರುಗಿರಿಶಿಖರ ಪಶ್ಚಿಮದ್ವಾರದಲ್ಲಿ ನಿಲಿಸಿದಡೆ, ಆ ಶಿಖರದ್ವಾರದ ಮಧ್ಯದಲ್ಲಿ ಅಮಲನಾದವನು ಅಮಲಾತೀತವೆಂಬ ಮಹಾನಾಟ್ಯವನು ಕಾಣಬಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.