Index   ವಚನ - 846    Search  
 
ಒಂದೆಂಬೆನೆ ಎರಡಾಗಿ ತೋರುತ್ತಿದೆ, ಎರಡೆಂಬೆನೆ ಒಂದಾಗಿ ತೋರುತ್ತಿದೆ, ಒಂದೆಂಬುದು ಅದ್ವೈತಿಯ ಮತ, ಎರಡೆಂಬುದು ದ್ವೈತಿಯ ಮತ, ಒಂದಲ್ಲ ಎರಡಲ್ಲ, ಅಪ್ರಮಾಣಕೂಡಲಸಂಗಮದೇವಾ. ನಿಮ್ಮ ಶರಣನ ಪರಿಯು ಬೇರೆ.