ಬೀಜವಿಲ್ಲದೆ ಅಂಕುರವಿಲ್ಲ, ಬೀಜವಿಲ್ಲದೆ ಅಂಕುರವ ಕಾಣಬಾರದು.
ಆ ಬೀಜವು ಅಂಕುರವು ಒಂದೆಂಬೆನೆ ಒಂದಲ್ಲ;
ಎರಡೆಂಬೆನೆ ಎರಡಲ್ಲ; ಬೀಜಾಂಕುರದ ನ್ಯಾಯ,
ಬಿಚ್ಚಿ ಬೇರಲ್ಲ, ಬೆರಸಿ ಒಂದಲ್ಲ
ಅಪ್ರಮಾಣಕೂಡಲಸಂಗಾ ನಿಮ್ಮ ಶರಣನು.
Art
Manuscript
Music
Courtesy:
Transliteration
Bījavillade aṅkuravilla, bījavillade aṅkurava kāṇabāradu.
Ā bījavu aṅkuravu ondembene ondalla;
eraḍembene eraḍalla; bījāṅkurada n'yāya,
bicci bēralla, berasi ondalla
apramāṇakūḍalasaṅgā nim'ma śaraṇanu.