Index   ವಚನ - 847    Search  
 
ಬೀಜವಿಲ್ಲದೆ ಅಂಕುರವಿಲ್ಲ, ಬೀಜವಿಲ್ಲದೆ ಅಂಕುರವ ಕಾಣಬಾರದು. ಆ ಬೀಜವು ಅಂಕುರವು ಒಂದೆಂಬೆನೆ ಒಂದಲ್ಲ; ಎರಡೆಂಬೆನೆ ಎರಡಲ್ಲ; ಬೀಜಾಂಕುರದ ನ್ಯಾಯ, ಬಿಚ್ಚಿ ಬೇರಲ್ಲ, ಬೆರಸಿ ಒಂದಲ್ಲ ಅಪ್ರಮಾಣಕೂಡಲಸಂಗಾ ನಿಮ್ಮ ಶರಣನು.