ಒಂದೆಂಬೆನೆ ಎರಡಾಗಿ ತೋರುತ್ತಿದೆ,
ಎರಡೆಂಬೆನೆ ಒಂದಾಗಿ ತೋರುತ್ತಿದೆ,
ಒಂದೆಂಬುದು ಅದ್ವೈತಿಯ ಮತ,
ಎರಡೆಂಬುದು ದ್ವೈತಿಯ ಮತ,
ಒಂದಲ್ಲ ಎರಡಲ್ಲ, ಅಪ್ರಮಾಣಕೂಡಲಸಂಗಮದೇವಾ.
ನಿಮ್ಮ ಶರಣನ ಪರಿಯು ಬೇರೆ.
Art
Manuscript
Music
Courtesy:
Transliteration
Ondembene eraḍāgi tōruttide,
eraḍembene ondāgi tōruttide,
ondembudu advaitiya mata,
eraḍembudu dvaitiya mata,
ondalla eraḍalla, apramāṇakūḍalasaṅgamadēvā.
Nim'ma śaraṇana pariyu bēre.