ಬೀಜವ ವೃಕ್ಷ ನುಂಗಿ ತೋರಿದ ಘನವನೇನೆಂಬೆ ನೋಡಾ!
ವೃಕ್ಷ ಬೀಜವ ನುಂಗಿ ತೊರಿದ ಘನವನೇನೆಂಬೆ ನೋಡಾ!
ಈ ಎರಡರ ಭೇದವನು ಉಪಮಿಸಬಾರದು.
ಬೀಜವೃಕ್ಷನ್ಯಾಯ ಲಿಂಗಾಂಗಭೇದ;
ಬಿಚ್ಚಿ ಬೇರಿಲ್ಲ ಬೆರಸಿ ಒಂದಲ್ಲ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Bījava vr̥kṣa nuṅgi tōrida ghanavanēnembe nōḍā!
Vr̥kṣa bījava nuṅgi torida ghanavanēnembe nōḍā!
Ī eraḍara bhēdavanu upamisabāradu.
Bījavr̥kṣan'yāya liṅgāṅgabhēda;
bicci bērilla berasi ondalla,
apramāṇakūḍalasaṅgamadēvā.