Index   ವಚನ - 856    Search  
 
ಎಂಟೆರಡೆಂಟೆರಡೆಂಬರು, ಎಂಟೆರಡೆಂಟೆರಡೆಂಬ ಅಣ್ಣಗಳು ನೀವು ಕೇಳಿರೆ, ಎಂಟೆರಡೆಂಟೆರಡೆಂಬ ಭೇದವನರಿಯದಿದ್ದೆನು ನೋಡಾ ಅನೇಕ ಕಾಲವು. ಎಂಟೆರಡೆಂಟೆರಡೆಂಬ ಭೇದವನರಿಯಿಸಿದನೆನ್ನ ಸದ್ಗುರುಸ್ವಾಮಿ. ಎಂಟೆರಡೆಂಟೆರಡೆಂಬ ಭೇದವನರಿವಿಂದರಿದಡೆ ಎಂಟೆರಡೆಂಬ ಭೇದ ಲಿಂಗಾಂಗ ನೋಡಾ ಅಪ್ರಮಾಣಕೂಡಲಸಂಗಮದೇವಾ.