Index   ವಚನ - 868    Search  
 
ಅಯ್ಯಾ, ಎನ್ನ ಮನವ ಮಹಾಮಾಯೆ ಮುಚ್ಚಿಕೊಂಡ ಕಾರಣ ಅನಂತ ಭವದಲ್ಲಿ ಬಂದೆನು. ಅಯ್ಯಾ, ಎನ್ನ ಮನ ಒಡೆದು ಚಿತ್ಪ್ರಕಾಶನಯನ ಮೂಡಿತ್ತು ನೋಡಾ. ಅಯ್ಯಾ, ಚಿತ್ಪ್ರಕಾಶನಯನ ಮೂಡಿ ಎನ್ನ ಸರ್ವಾಂಗವ ಭೇದಿಸಿ ಅತ್ತತ್ತ ವಿೂರಿ ತೋರಿತ್ತು ನೋಡಾ. ಅಯ್ಯಾ, ಎನ್ನ ಭವಬಂಧನದ ಬೇರ ಕಿತ್ತೀಡಾಡಿದೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.