Index   ವಚನ - 867    Search  
 
ಮೂರುಲೋಕವ ನುಂಗಿತ್ತು ನೋಡಾ ಒಂದು ಕಪ್ಪೆ, ಆ ಕಪ್ಪೆಯ ನುಂಗಿದಳು ನೋಡಾ ಒಬ್ಬ ಸೂಳೆ, ಆ ಸೂಳೆಯ ನುಂಗಿ ತೇಗಿತ್ತು ನೋಡಾ ಒಂದಿರುಹೆ ಅಪ್ರಮಾಣಕೂಡಲಸಂಗಮದೇವಾ.