Index   ವಚನ - 875    Search  
 
ಚಿತ್ಸ್ವರೂಪವಾಗಿ ತನ್ನೊಳಗೆ ತೀರ್ಥ ಚಿತ್ಪ್ರಕಾಶವಾಗಿಹುದು ನೋಡಾ. ಆ ತೀರ್ಥವನರಿಯದೆ ಹೊರಗೆ ಹರಿವ ನೀರ ತೀರ್ಥವೆಂದು ಹೋಗುವರು ನೋಡಾ. ಶುದ್ಧಪ್ರಕಾಶವಾಗಿಹ ತೀರ್ಥವನರಿಯದೆ ಹರಿವ ನೀರ ತೀರ್ಥವೆಂದು ಹೋಗುವ ಭವಭಾರಿಗಳಿಗೆ ಎಂದೆಂದಿಗೂ ಜನನ ಮರಣ ಬಿಡದು ನೋಡಾ ಅಪ್ರಮಾಣಕೂಡಲಸಂಗಮದೇವಾ.