Index   ವಚನ - 883    Search  
 
ನಕಾರದೊಳಗೆ ಐವತ್ತೊಂದಕ್ಷರವನರಿಯದೆ ಎಂತು ಆಚಾರಲಿಂಗಸಂಬಂಧಿಯೆಂಬೆ? ಮಕಾರದೊಳಗೆ ಐವತ್ತೊಂದಕ್ಷರವನರಿಯದೆ ಎಂತು ಗುರುಲಿಂಗಸಂಬಂಧಿಯೆಂಬೆ? ಶಿಕಾರದೊಳಗೆ ಐವತ್ತೊಂದಕ್ಷರವನರಿಯದೆ ಎಂತು ಶಿವಲಿಂಗಸಂಬಂಧಿಯೆಂಬೆ? ವಕಾರದೊಳಗೆ ಐವತ್ತೊಂದಕ್ಷರವನರಿಯದೆ ಎಂತು ಜಂಗಮಲಿಂಗಸಂಬಂಧಿಯೆಂಬೆ? ಯಕಾರದೊಳಗೆ ಐವತ್ತೊಂದಕ್ಷರವನರಿಯದೆ ಎಂತು ಪ್ರಸಾದಲಿಂಗಸಂಬಂಧಿಯೆಂಬೆ? ಓಂಕಾರದೊಳಗೆ ಐವತ್ತೊಂದಕ್ಷರವನರಿಯದೆ? ಎಂತು ಮಹಾಲಿಂಗಸಂಬಂಧಿಯೆಂಬೆ? ಓಂಕಾರದೊಳಗೆ ಸಮಸ್ತ ಭೇದಾದಿಭೇದಂಗಳ ತಿಳಿದು ಮೀರಿ ನಿರ್ವಯಲನರಿಯದೆ, ಎಂತು ನಿರ್ವಯಲಸಂಬಂಧಿಯೆಂಬೆನಯ್ಯಾ ಅಪ್ರಮಾಣಕೂಡಲಸಂಗಮದೇವಾ.