Index   ವಚನ - 882    Search  
 
ನಿರಂಜನ ಜಾಗ್ರದಲ್ಲಿನಿಂದಡೆ ಭಕ್ತನೆಂಬೆ. ನಿರಂಜನ ಸ್ವಪ್ನದಲ್ಲಿನಿಂದಡೆ ಮಹೇಶ್ವರನೆಂಬೆ ನಿರಂಜನ ಸುಷುಪ್ತಿಯಲ್ಲಿ ನಿಂದಡೆ ಪ್ರಸಾದಿಯೆಂಬೆ. ನಿರಂಜನ ತೂರ್ಯದಲ್ಲಿ ನಿಂದಡೆ ಪ್ರಾಣಲಿಂಗಿಯೆಂಬೆ. ನಿರಂಜನ ವ್ಯೋಮದಲ್ಲಿ ನಿಂದಡೆ ಶರಣನೆಂಬೆ. ನಿರಂಜನ ವ್ಯೋಮಾತೀತದಲ್ಲಿ ನಿಂದಡೆ ಐಕ್ಯನೆಂಬೆ. ನಿರಂಜನ ವ್ಯೋಮಾತೀತಕತ್ತತ್ತವಾಗಿಹ ಮಹಾಘನ ನಿರ್ವಾಣಾತೀತವೆ ಅಂಗವಾದ ಮಹಾಶರಣಂಗೆ ಭವಹಿಂಗಿತ್ತಾಗಿ, ಅವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.