ಅಂಧಕಾರವಾಗಿಹ ಕತ್ತಲೆಯೊಳು ಮಹಾಮೇರುವಿಹುದು ನೋಡಾ.
ಆ ಮಹಾಮೇರುವ ಉದಯಾಸ್ತಮಯವಾಗಿಹ
ಚಂದ್ರಸೂರ್ಯರು ತಿರುಗುವರು.
ಆ ಚಂದ್ರಸೂರ್ಯರ ದೆಸೆಯಿಂದ
ಇರುಳು ಹಗಲೆಂಬ ವೃಕ್ಷ ಹುಟ್ಟಿ,
ಆ ವೃಕ್ಷಕ್ಕೆ ಅರವತ್ತು ಶಾಖೆಗಳಲ್ಲಿ
ಮುನ್ನೂರರವತ್ತು ಮುನ್ನೂರರವತ್ತು
ಗೂಬೆಗಳು ಕುಳಿತು ಕೂಗುತ್ತಿಹವು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Andhakāravāgiha kattaleyoḷu mahāmēruvihudu nōḍā.
Ā mahāmēruva udayāstamayavāgiha
candrasūryaru tiruguvaru.
Ā candrasūryara deseyinda
iruḷu hagalemba vr̥kṣa huṭṭi,
ā vr̥kṣakke aravattu śākhegaḷalli
munnūraravattu munnūraravattu
gūbegaḷu kuḷitu kūguttihavu nōḍā
apramāṇakūḍalasaṅgamadēvā.