ಓಂಕಾರವೆಂಬ ಬಾವಿಯೊಳಗೆ
ಒಂದು ಮರ ಹುಟ್ಟಿತ್ತು ನೋಡಾ.
ಆ ಮರಕ್ಕೆ ಮೂರೇಳು ಸಾವಿರದಾರುನೂರು
ಕೊಂಬೆಗಳಾದವು ನೋಡಾ.
ಏಳುಸಾವಿರದಿನ್ನೂರು ಕೊಂಬೆ ಮುರಿದು ಬಿದ್ದವು ನೋಡಾ.
ಪೃಥ್ವಿ ಜಲದಲ್ಲಿ ಮುದ್ದೆಯಾಯಿತ್ತು;
ಆ ಹಣ್ಣ ಸವಿಯಬಲ್ಲಾತನು ಮಹಾಶರಣ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ōṅkāravemba bāviyoḷage
ondu mara huṭṭittu nōḍā.
Ā marakke mūrēḷu sāviradārunūru
kombegaḷādavu nōḍā.
Ēḷusāviradinnūru kombe muridu biddavu nōḍā.
Pr̥thvi jaladalli muddeyāyittu;
ā haṇṇa saviyaballātanu mahāśaraṇa nōḍā
apramāṇakūḍalasaṅgamadēvā.