ತತ್ವಮೂರರಾದಿಯನರಿದು,
ಮೂರರೊಳಗೆ ಮೂವತ್ತಾರುತತ್ತ್ವವ ಭೇದಿಸಿ,
ಆ ಮೂವತ್ತಾರುತತ್ತ್ವದೊಳಗೆ
ತ್ವಂಪದ ತತ್ಪದ ಅಸಿಪದಂಗಳನರಿದು,
ಅಕಾರ ಉಕಾರ ಮಕಾರವ ತಿಳಿದು,
ತ್ವಂಪದ ತತ್ಪದ ಅಸಿಪದಂಗಳ
ಅಕಾರ ಉಕಾರ ಮಕಾರದಲ್ಲಿ ಅಡಗಿಸಿ,
ಆ ಪ್ರಣವದ ಶಿರೋಮಧ್ಯದಲ್ಲಿಹುದೆ ಜ್ಯೋತಿರ್ಮಯಲಿಂಗ,
ಆ ಜ್ಯೋತಿರ್ಮಯಲಿಂಗವನರಿದ ಶರಣ
ಜ್ಞಾನಿಯೆಂಬೆನೆ ಜ್ಞಾನಿಯಲ್ಲ, ಅಜ್ಞಾನಿಯೆಂಬೆನೆ
ಅದಕ್ಕೆ ಮುನ್ನವೆ ಅಲ್ಲ ,
ದ್ವೈತಿಯೆಂಬೆನೆ ದ್ವೈತಿಯಲ್ಲ,
ಅದ್ವೈತಿಯೆಂಬೆನೆ ಅದ್ವೈತಿಯಲ್ಲ,
ಶೂನ್ಯನೆಂಬೆನೆ ಶೂನ್ಯನಲ್ಲ, ನಿಶ್ಶೂನ್ಯನೆಂಬೆನೆ ನಿಶ್ಶೂನ್ಯನಲ್ಲ.
ನಿಮ್ಮ ಶರಣನ ನಿಲವ ನೀನೆ ಬಲ್ಲೆಯಯ್ಯಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Tatvamūrarādiyanaridu,
mūraroḷage mūvattārutattvava bhēdisi,
ā mūvattārutattvadoḷage
tvampada tatpada asipadaṅgaḷanaridu,
akāra ukāra makārava tiḷidu,
tvampada tatpada asipadaṅgaḷa
akāra ukāra makāradalli aḍagisi,
ā praṇavada śirōmadhyadallihude jyōtirmayaliṅga,Ā jyōtirmayaliṅgavanarida śaraṇa
jñāniyembene jñāniyalla, ajñāniyembene
adakke munnave alla,
dvaitiyembene dvaitiyalla,
advaitiyembene advaitiyalla,
śūn'yanembene śūn'yanalla, niśśūn'yanembene niśśūn'yanalla.
Nim'ma śaraṇana nilava nīne balleyayyā
apramāṇakūḍalasaṅgamadēvā.