Index   ವಚನ - 905    Search  
 
ಇನ್ನು ಸಹಸ್ರಾಕ್ಷರ ತ್ರಯಾಕ್ಷರ ಏಕಾಕ್ಷರ ನಿವೃತ್ತಿ ಅದೆಂತೆಂದಡೆ: ಸಹಸ್ರಾಕ್ಷರ ತ್ರಯಾಕ್ಷರದಲ್ಲಿ ಅಡಗಿತ್ತು. ಆ ತ್ರಯಾಕ್ಷರ ಏಕಾಕ್ಷರದಲ್ಲಿ ಅಡಗಿತ್ತು. ಆ ಏಕಾಕ್ಷರ `ನಿಃಶಬ್ದಂ ಬ್ರಹ್ಮ ಉಚ್ಯತೇ'-ಎಂಬ ಪರಬ್ರಹ್ಮದಲ್ಲಿ ಅಡಗಿತ್ತು ನೋಡಾ, ಅಪ್ರಮಾಣಕೂಡಲಸಂಗಮದೇವಾ.