ಇನ್ನು ಷಡ್ವಿಧಲಿಂಗ ಅದೆಂತೆಂದಡೆ:
ಪೃಥ್ವಿಯಲ್ಲಿ ಆಚಾರಲಿಂಗವಿಹುದು,
ಅಪ್ಪುವಿನಲ್ಲಿ ಗುರುಲಿಂಗವಿಹುದು;
ತೇಜದಲ್ಲಿ ಶಿವಲಿಂಗವಿಹುದು,
ವಾಯುವಿನಲ್ಲಿ ಜಂಗಮಲಿಂಗವಿಹುದು,
ಆಕಾಶದಲ್ಲಿ ಪ್ರಸಾದಲಿಂಗವಿಹುದು,
ಆತ್ಮನಲ್ಲಿ ಮಹಾಲಿಂಗವಿಹುದು ನೋಡಾ,
ಶಿವಲಿಂಗ ಸೂತ್ರೇ ಸಾಕ್ಷಿ-
ಆಚಾರಂ ಪಥ್ವೀಭೂತೇ ಚ ಆಪಶ್ಚ ಗುರುಲಿಂಗಯೋಃ |
ತೇಜಂ ಚ ಶಿವಲಿಂಗಂ ವಾಯೌಚ ಚರಲಿಂಗಕಂ ||
ಪ್ರಸಾದಲಿಂಗೇತ್ವಾಕಾಶಂ ಆತ್ಮಾ ಚ ಮಹಾಮೇವ ಚ |
ಇತಿ ಲಿಂಗಸ್ಥಲಂ ಜ್ಞಾತ್ವಾ ದುರ್ಲಭಂ ಚ ವರಾನನೇ ||''
ಎಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu ṣaḍvidhaliṅga adentendaḍe:
Pr̥thviyalli ācāraliṅgavihudu,
appuvinalli guruliṅgavihudu;
tējadalli śivaliṅgavihudu,
vāyuvinalli jaṅgamaliṅgavihudu,
ākāśadalli prasādaliṅgavihudu,
ātmanalli mahāliṅgavihudu nōḍā,
śivaliṅga sūtrē sākṣi-
ācāraṁ pathvībhūtē ca āpaśca guruliṅgayōḥ |
tējaṁ ca śivaliṅgaṁ vāyauca caraliṅgakaṁ ||
prasādaliṅgētvākāśaṁ ātmā ca mahāmēva ca |
iti liṅgasthalaṁ jñātvā durlabhaṁ ca varānanē ||''
endudāgi,
apramāṇakūḍalasaṅgamadēvā.