ಇನ್ನು ಷಡಧ್ವದುತ್ಪತ್ಯವದೆಂತೆಂದಡೆ:
ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ಜ್ಯೋತಿರೂಪದಲ್ಲಿ ಹೃದಯಮಂತ್ರ ಉತ್ಪತ್ಯ.
ಆ ಪ್ರಣವದ ದರ್ಪಣಾಕಾರದಲ್ಲಿ ಶಿರೋಮಂತ್ರ ಉತ್ಪತ್ಯ.
ಆ ಪ್ರಣವದ ಅರ್ಧಚಂದ್ರಕದಲ್ಲಿ ಶಿಖಾಮಂತ್ರ ಉತ್ಪತ್ಯ.
ಆ ಪ್ರಣವದ ಕುಂಡಲಾಕಾರದಲ್ಲಿ ಕವಚಮಂತ್ರ ಉತ್ಪತ್ಯ.
ಆ ಪ್ರಣವದ ದಂಡಕಸ್ವರೂಪದಲ್ಲಿ ನೇತ್ರಮಂತ್ರ ಉತ್ಪತ್ಯ.
ಆ ಪ್ರಣವದ ತಾರಕಸ್ವರೂಪದಲ್ಲಿ ಅಸ್ತ್ರಮಂತ್ರ ಉತ್ಪತ್ಯ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu ṣaḍadhvadutpatyavadentendaḍe:
Akhaṇḍajyōtirmayavāgiha gōḷakākārapraṇavada
jyōtirūpadalli hr̥dayamantra utpatya.
Ā praṇavada darpaṇākāradalli śirōmantra utpatya.
Ā praṇavada ardhacandrakadalli śikhāmantra utpatya.
Ā praṇavada kuṇḍalākāradalli kavacamantra utpatya.
Ā praṇavada daṇḍakasvarūpadalli nētramantra utpatya.
Ā praṇavada tārakasvarūpadalli astramantra utpatya nōḍā
apramāṇakūḍalasaṅgamadēvā.