ನಿರಂಜನ ಪ್ರಣವದುತ್ಪತ್ಯ:
ಏನೂ ಏನೂ ಎನಲಿಲ್ಲದ ಮಹಾಘನ ನಿರಂಜನಾತೀತದ
ನೆನಹು ಮಾತ್ರದಲ್ಲಿ ನಿರಂಜನಪ್ರಣವ ಉತ್ಪತ್ಯವಾಯಿತ್ತು.
ಆ ನಿರಂಜನಪ್ರಣವದ ನೆನಹುಮಾತ್ರದಲ್ಲಿ
ಕಲಾಪ್ರಣವ ಉತ್ಪತ್ಯವಾಯಿತ್ತು.
ಆ ಕಲಾಪ್ರಣವದ ನೆನಹುಮಾತ್ರದಲ್ಲಿ
ಅನಾದಿಪ್ರಣವ ಉತ್ಪತ್ಯವಾಯಿತ್ತು.
ಆ ಅನಾದಿಪ್ರಣವದ ನೆನಹುಮಾತ್ರದಲ್ಲಿ
ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು.
ಆ ಅಕಾರ ಉಕಾರ ಮಕಾರದ ರೂಪಾಂಗಭೇದದಿಂದ
ಒಂಬತ್ತು ಪ್ರಣವ ಉತ್ಪತ್ಯವಾಯಿತ್ತು.
ಅಕಾರ ಉಕಾರ ಮಕಾರ ಈ ಮೂರು ಕೂಡಿ
ಏಕಾರ್ಥವಾಗಿಹ ಪ್ರಣವ ಶಿವಸಂಬಂಧವಾಗಿಹವು.
ಆ ಅಕಾರ ಉಕಾರ ಮಕಾರ ಈ ಮೂರು ಕೂಡಿ
ಏಕಾರ್ಥವಾಗಿಹ ಪ್ರಣವ ಶಿವಶಕ್ತಿರಹಿತವಾಗಿಹುದು.
ಆ ಶಿವಸಂಬಂಧವಾಗಿಹ ಅಖಂಡಗೋಳಕಾಕಾರಪ್ರಣವದಲ್ಲಿ
ಜ್ಯೋತಿಸ್ವರೂಪಪ್ರಣವವೆಂದು, ದರ್ಪಣಾಕಾರಪ್ರಣವವೆಂದು,
ಕುಂಡಲಾಕಾರಪ್ರಣವವೆಂದು, ದಂಡಕಸ್ವರೂಪಪ್ರಣವವೆಂದು
ಅರ್ಧಚಂದ್ರಕಪ್ರಣವವೆಂದು, ತಾರಕಸ್ವರೂಪಪ್ರಣವವೆಂದು
ಆರುಪ್ರಕಾರವಾಗಿಹುದು.
ಶಕ್ತಿಸಂಬಂಧವಾದ ಪರಂಜ್ಯೋತಿಸ್ವರೂಪವಾಗಿಹ ಪರಮಪ್ರಣವದಲ್ಲಿ
ತಾರಕಸ್ವರೂಪಪ್ರಣವವೆಂದು, ದಂಡಕಸ್ವರೂಪಪ್ರಣವವೆಂದು
ಕುಂಡಲಾಕಾರಪ್ರಣವವೆಂದು ಅರ್ಧಚಂದ್ರಕಪ್ರಣವವೆಂದು
ದರ್ಪಣಾಕಾರಪ್ರಣವವೆಂದು ಜ್ಯೋತಿಸ್ವರೂಪಪ್ರಣವವೆಂದು
ಆರು ಪ್ರಕಾರವಾಗಿಹುದು.
ಶಿವಶಕ್ತಿರಹಿತವಾಗಿಹ ಅಖಂಡಮಹಾಜ್ಯೋತಿಪ್ರಣವದಲ್ಲಿ
ಮೂರ್ತಿಬ್ರಹ್ಮಪ್ರಣವವೆಂದು, ಪಿಂಡಬ್ರಹ್ಮಪ್ರಣವವೆಂದು,
ಕಲಾಬ್ರಹ್ಮಪ್ರಣವವೆಂದು, ಬ್ರಹ್ಮಾನಂದಬ್ರಹ್ಮಪ್ರಣವವೆಂದು,
ವಿಜ್ಞಾನಬ್ರಹ್ಮಪ್ರಣವವೆಂದು ಪರಬ್ರಹ್ಮಪ್ರಣವವೆಂದು
ಈ ಆರು ಪ್ರಣವಂಗಳು ಷಟ್ಸ್ಥಲಬ್ರಹ್ಮ ತಾನೆ
ಷಷ್ಠಪ್ರಣವವಾಗಿಹುದೆಂದು
ನಿರಾಮಯಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳಿಹುದು.
ಇನ್ನು ಶಿವಸಂಬಂಧವಾದ ಅಖಂಡಜ್ಯೋತಿರ್ಮಯವಾಗಿಹ
ಗೋಳಕಾಕಾರಪ್ರಣವದ ದರ್ಪಣಾಕಾರದ ಪ್ರಣವದಲ್ಲಿ
ಈಶಾನ್ಯಮುಖವು ಉತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕಪ್ರಣವದಲ್ಲಿ
ತತ್ಪುರುಷಮುಖವು ಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರಪ್ರಣವದಲ್ಲಿ
ಅಘೋರಮುಖವು ಉತ್ಪತ್ಯವಾಯಿತ್ತು.
ಆ ಪ್ರಣವದ ದಂಡಕಸ್ವರೂಪಪ್ರಣವದಲ್ಲಿ
ವಾಮದೇವಮುಖವು ಉತ್ಪತ್ಯವಾಯಿತ್ತು.
ಆ ಪ್ರಣವದ ತಾರಕಸ್ವರೂಪಪ್ರಣವದಲ್ಲಿ
ಸದ್ಯೋಜಾತಮುಖವು ಉತ್ಪತ್ಯವಾಯಿತ್ತು.
ಈಶಾನ್ಯಮುಖದಲ್ಲಿ ಸಾಯುಜ್ಯಪ್ರಣವ ಉತ್ಪತ್ಯವಾಯಿತ್ತು.
ತತ್ಪುರುಷಮುಖದಲ್ಲಿ ಸಾಕಲ್ಯಪ್ರಣವ ಉತ್ಪತ್ಯವಾಯಿತ್ತು.
ಅಘೋರಮುಖದಲ್ಲಿ ಶಾಂಭವಪ್ರಣವ ಉತ್ಪತ್ಯವಾಯಿತ್ತು.
ವಾಮದೇವಮುಖದಲ್ಲಿ ಸ್ವಾಸ್ಯಪ್ರಣವ ಉತ್ಪತ್ಯವಾಯಿತ್ತು.
ಸದ್ಯೋಜಾತಮುಖದಲ್ಲಿ ಸೌಖ್ಯಪ್ರಣವ ಉತ್ಪತ್ಯವಾಯಿತ್ತು.
ಶಿವಸಂಬಂಧವಾದ ಅಖಂಡಜ್ಯೋತಿರ್ಮಯವಾಗಿಹ
ಗೋಳಕಾಕಾರಪ್ರಣವವು,
ಶಕ್ತಿಸಂಬಂಧವಾದ ಅಖಂಡಜ್ಯೋತಿರ್ಮಯವಾಗಿಹ
ಗೋಳಕಾಕಾರ ಪರಬ್ರಹ್ಮಪ್ರಣವವು,
ಶಿವಶಕ್ತಿರಹಿತವಾಗಿಹ ಅಖಂಡಮಹಾಜ್ಯೋತಿಪ್ರಣವ
ಈ ಮೂರು ಪ್ರಣವಂಗಳು ಕೂಡಿ ಏಕಾರ್ಥವಾಗಿ
ಅಖಂಡಿತ ಅಪ್ರಮಾಣ ಅಗೋಚರ ಅಪ್ರಮೇಯ ಅಗಮ್ಯ
ವಾಚಾಮಗೋಚರಕತ್ತತ್ತವಾದ ಮಹಾಘನಕ್ಕೆ
ಘನವನೇನೆಂದುಪಮಿಸಬಾರದ
ಉಪಮಾತೀತಕತ್ತತ್ತವಾಗಿಹನು ನೋಡಾ,
ನಮ್ಮ ಅಪ್ರಮಾಣಕೂಡಲಸಂಗಮದೇವನು.
Art
Manuscript
Music
Courtesy:
Transliteration
Niran̄jana praṇavadutpatya:
Ēnū ēnū enalillada mahāghana niran̄janātītada
nenahu mātradalli niran̄janapraṇava utpatyavāyittu.
Ā niran̄janapraṇavada nenahumātradalli
kalāpraṇava utpatyavāyittu.
Ā kalāpraṇavada nenahumātradalli
anādipraṇava utpatyavāyittu.
Ā anādipraṇavada nenahumātradalli
akāra ukāra makāra utpatyavāyittu.
Ā akāra ukāra makārada rūpāṅgabhēdadinda
ombattu praṇava utpatyavāyittu.
Akāra ukāra makāra ī mūru kūḍi
ēkārthavāgiha praṇava śivasambandhavāgihavu.
Ā akāra ukāra makāra ī mūru kūḍi
ēkārthavāgiha praṇava śivaśaktirahitavāgihudu.
Ā śivasambandhavāgiha akhaṇḍagōḷakākārapraṇavadalli
Jyōtisvarūpapraṇavavendu, darpaṇākārapraṇavavendu,
kuṇḍalākārapraṇavavendu, daṇḍakasvarūpapraṇavavendu
ardhacandrakapraṇavavendu, tārakasvarūpapraṇavavendu
āruprakāravāgihudu.
Śaktisambandhavāda paran̄jyōtisvarūpavāgiha paramapraṇavadalli
tārakasvarūpapraṇavavendu, daṇḍakasvarūpapraṇavavendu
Kuṇḍalākārapraṇavavendu ardhacandrakapraṇavavendu
darpaṇākārapraṇavavendu jyōtisvarūpapraṇavavendu
āru prakāravāgihudu.
Śivaśaktirahitavāgiha akhaṇḍamahājyōtipraṇavadalli
mūrtibrahmapraṇavavendu, piṇḍabrahmapraṇavavendu,
kalābrahmapraṇavavendu, brahmānandabrahmapraṇavavendu,
vijñānabrahmapraṇavavendu parabrahmapraṇavavendu
Ī āru praṇavaṅgaḷu ṣaṭsthalabrahma tāne
ṣaṣṭhapraṇavavāgihudendu
nirāmayātītāgamadalli prasid'dhavāgi hēḷihudu.
Innu śivasambandhavāda akhaṇḍajyōtirmayavāgiha
gōḷakākārapraṇavada darpaṇākārada praṇavadalli
īśān'yamukhavu utpatyavāyittu.
Ā praṇavada ardhacandrakapraṇavadalli
tatpuruṣamukhavu utpatyavāyittu.
Ā praṇavada kuṇḍalākārapraṇavadalli
aghōramukhavu utpatyavāyittu.
Ā praṇavada daṇḍakasvarūpapraṇavadalli
vāmadēvamukhavu utpatyavāyittu.
Ā praṇavada tārakasvarūpapraṇavadalli
sadyōjātamukhavu utpatyavāyittu.
Īśān'yamukhadalli sāyujyapraṇava utpatyavāyittu.
Tatpuruṣamukhadalli sākalyapraṇava utpatyavāyittu.
Aghōramukhadalli śāmbhavapraṇava utpatyavāyittu.
Vāmadēvamukhadalli svāsyapraṇava utpatyavāyittu.
Sadyōjātamukhadalli saukhyapraṇava utpatyavāyittu.
Śivasambandhavāda akhaṇḍajyōtirmayavāgiha
gōḷakākārapraṇavavu,
Śaktisambandhavāda akhaṇḍajyōtirmayavāgiha
gōḷakākāra parabrahmapraṇavavu,
śivaśaktirahitavāgiha akhaṇḍamahājyōtipraṇava
ī mūru praṇavaṅgaḷu kūḍi ēkārthavāgi
akhaṇḍita apramāṇa agōcara apramēya agamya
vācāmagōcarakattattavāda mahāghanakke
ghanavanēnendupamisabārada
Upamātītakattattavāgihanu nōḍā,
nam'ma apramāṇakūḍalasaṅgamadēvanu.