Index   ವಚನ - 915    Search  
 
ದಾಸಿಯ ಸಂಗವುಳ್ಳನ್ನಬರ ಗುರುವಿಲ್ಲವೆಂಬ ಶ್ರುತಿ ದಿಟ ನೋಡಾ. ವೇಶಿಯ ಸಂಗವುಳ್ಳನ್ನಬರ ಲಿಂಗವಿಲ್ಲವೆಂಬ ಶ್ರುತಿ ದಿಟ ನೋಡಾ. ಪರಸ್ತ್ರೀಯ ಸಂಗವುಳ್ಳನ್ನಬರ ಜಂಗಮವಿಲ್ಲವೆಂಬ ಶ್ರುತಿ ದಿಟ ನೋಡಾ. ಈ ತ್ರಿವಿಧಸಂಗವುಳ್ಳನ್ನಬರ ತ್ರಿವಿಧಪ್ರಸಾದವಿಲ್ಲವೆಂಬ ಶ್ರುತಿ ದಿಟ ನೋಡಾ. ತ್ರಿವಿಧಪ್ರಸಾದವಿಲ್ಲದಾತನೆ ಅನಾಚಾರಿಯೆಂಬ ಶ್ರುತಿ ದಿಟ ನೋಡಾ. ಆ ಅನಾಚಾರಿಯೆ ಪಂಚಮಹಾಪಾತಕನೆಂಬ ಶ್ರುತಿ ದಿಟ ನೋಡಾ ಅಪ್ರಮಾಣಕೂಡಲಸಂಗಮದೇವಾ.