Index   ವಚನ - 2    Search  
 
ಇನ್ನೂರ ಇಪ್ಪತ್ತು ನಾಲ್ಕು ಮಹಾಭುವನಂಗಳ ವಿಸ್ತೀರ್ಣವನು, ಆ ಭುವನ ಭುವನಂಗಳಲ್ಲಿಹ ಭುವನಾಧಿಪತಿಗಳನು, ಆ ಭುವನಾಧಿಪತಿಗಳಲ್ಲಿ ಓಲಂಗಗೊಟ್ಟಿಹ ಬ್ರಹ್ಮಗಣ ವಿಷ್ಣುಗಣ ರುದ್ರಗಣ ದೇವಗಣ ವೇದಗಣ ಮುನಿಗಣಂಗಳು ಮೊದಲಾಗಿ ಎಲ್ಲಾ ಗಣಂಗಳ ಪ್ರಮಾಣವ ಪ್ರಮಾಣಿಸಿ, ಮತ್ತಂ, ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿ ಮೂಲಸ್ವಾಮಿಗತ್ತತ್ತವಾಗಿಹ ಅಖಂಡ ಮಹಾಮೂಲಸ್ವಾಮಿಯ ರೂಪು-ಲಾವಣ್ಯ-ಸೌಂದರ್ಯ-ಅಂಗ-ಪ್ರತ್ಯಂಗಸ್ವರೂಲಪ್ಪ ಭಾವಂಗಳ ಹೇಳುತ್ತಿಹೆನು ಚಿತ್ತೈಸುವುದಯ್ಯ ಶರಣಗಣಂಗಳು ಅಪ್ರಮಾಣ ಕೂಡಲಸಂಗಮದೇವಾ.