Index   ವಚನ - 7    Search  
 
ಅಂಥ ಬ್ರಹ್ಮಾಂಡ ಐದುಸಾವಿರದ ನಾಲ್ವತ್ತೆಂಟುಕೋಟಿ ಬ್ರಹ್ಮಾಂಡವನೊಳಕೊಂಡುದೊಂದು ವ್ಯಾಪಿನಿಯೆಂಬ ಭುವನ. ಆ ಭುವನದೊಳು ಮಹಾಕಾಲನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಇಪ್ಪತ್ತೈದುಕೋಟಿ ರುದ್ರ ಬ್ರಹ್ಮ ನಾರಾಯಣರು, ಇಪ್ಪತ್ತೈದುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು, ಮೂವತ್ತೆಂಟುಕೋಟಿ ದೇವರ್ಕಳಿಹರು ನೋಡಾ ಅಪ್ರಮಾಣ ಕೂಡಲಸಂಗಮದೇವಾ.