ಅಂಥ ಬ್ರಹ್ಮಾಂಡವ ಎಂಟುಸಾವಿರದ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ರೋಚಿಕಾಯೆಂಬ ಭುವನ.
ಆ ಭುವನದೊಳು ಭವರೋಗಸಂಹಾರನೆಂಬ
ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾಲ್ವತ್ತು ಕೋಟಿ ಬ್ರಹ್ಮ ನಾರಾಯಣ ರುದ್ರರು, ಇಂದ್ರಚಂದ್ರಾದಿತ್ಯರು,
ನಾಲ್ವತ್ತು ಕೋಟಿ ವೇದಪುರುಷರು ಮುನೀಂದ್ರರು,
ನಾಲ್ವತ್ತೊಂದುಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.