Index   ವಚನ - 11    Search  
 
ಅಂಥ ಬ್ರಹ್ಮಾಂಡವ ಒಂಬತ್ತುಸಾವಿರದ ಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ದೀಪಿಕಾಧಿಕವೆಂಬ ಭುವನ. ಆ ಭುವನದೊಳು ಏಕಪಾದನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನಾಲ್ವತ್ತೈದುಕೋಟಿ ಬ್ರಹ್ಮ ರುದ್ರ ನಾರಾಯಣರು, ನಾಲ್ವತ್ತೈದುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು, ನಾಲ್ವತ್ತೆರಡುಕೋಟಿ ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.