ಅಂಥ ಬ್ರಹ್ಮಾಂಡವ ಹದಿನೈದುಸಾವಿರದ ನೂರಾನಾಲ್ವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸದಾಶಿವನೆಂಬ ಭುವನ.
ಆ ಭುವನದೊಳು ಪಂಚಪಾದನೆಂಬ ಮಹಾರುದ್ರಮೂರ್ತಿ ಇಹನು.
ಆ ಮಹಾರುದ್ರಮೂರ್ತಿಯ ಓಲಗದಲ್ಲಿ
ಎಪ್ಪತ್ತೈದುಕೋಟಿ ಇಂದ್ರ ಬ್ರಹ್ಮ ನಾರಾಯಣ ರುದ್ರರು,
ಎಪ್ಪತ್ತು ಕೋಟಿ ವೇದಪುರುಷರು, ಮುನೀಂದ್ರರು, ಚಂದ್ರಾದಿತ್ಯರು,
ಎಪ್ಪತ್ತು ಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.