Index   ವಚನ - 26    Search  
 
ಅಂಥ ಬ್ರಹ್ಮಾಂಡವ ಇಪ್ಪತ್ತುನಾಲ್ಕುಸಾವಿರದ ಇನ್ನೂರ ಮೂವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಸದಾನಂದವೆಂಬ ಭುವನ. ಆ ಭುವನದೊಳು ಸಚ್ಚಿದಾನಂದನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನೂರಾ ಇಪ್ಪತ್ತುಕೋಟಿ ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು, ನೂರಾ ಇಪ್ಪತ್ತುಕೋಟಿ ರುದ್ರ ಬ್ರಹ್ಮ ನಾರಾಯಣರು, ದೇವರ್ಕಳಿಹರು ನೋಡಾ, ಅಪ್ರಮಾಣಕೂಡಲಸಂಗಮದೇವಾ.