Index   ವಚನ - 31    Search  
 
ಅಂಥ ಬ್ರಹ್ಮಾಂಡವ ಇಪ್ಪತ್ತೊಂಬತ್ತು ಸಾವಿರದ ಇನ್ನೂರ ಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಶಿಖಂಡಿಯೆಂಬ ಭುವನ. ಆ ಭುವನದೊಳು ಸಹಸ್ರಪಾದನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನೂರಾನಾಲ್ವತ್ತೈದುಕೋಟಿ ವಿಷ್ಣು ಬ್ರಹ್ಮ ರುದ್ರಾದಿಗಳು,ಇಂದ್ರಚಂದ್ರಾದಿತ್ಯರು, ನೂರಾನಾಲ್ವತ್ತೈದುಕೋಟಿ ವೇದಪುರುಷರು, ಮುನೀಂದ್ರರು, ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.