Index   ವಚನ - 47    Search  
 
ಅಂಥ ಬ್ರಹ್ಮಾಂಡವ ನಾಲ್ವತ್ತೈದು ಸಾವಿರದಾ ನಾನೂರಾನಾಲ್ವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ವಾಮದೇವವೆಂಬ ಭುವನ. ಆ ಭುವನದೊಳು ಹರಿಹರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಇನ್ನೂರಾ ಇಪ್ಪತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರು, ವೇದಪುರುಷರು ಮುನೀಂದ್ರರು ಇಹರು ನೋಡಾ, ಇನ್ನೂರಾ ಇಪ್ಪತ್ತೈದು ಕೋಟಿ ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.