Index   ವಚನ - 48    Search  
 
ಅಂಥ ಬ್ರಹ್ಮಾಂಡವ ನಾಲ್ವತ್ತಾರುಸಾವಿರದ ನಾನೂರಾ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಮಹಾದೇವವೆಂಬ ಭುವನ. ಆ ಭುವನದೊಳು ಅನಂತಬ್ರಹ್ಮಾಂಡಸಂಹಾರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಇನ್ನೂರಾ ಮೂವತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರು, ಇಂದ್ರ-ಚಂದ್ರಾದಿತ್ಯರು, ಇನ್ನೂರಾಮೂವತ್ತುಕೋಟಿ ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.