Index   ವಚನ - 64    Search  
 
ಅಂಥ ಬ್ರಹ್ಮಾಂಡವ ಅರವತ್ತೆರಡು ಸಾವಿರದ ಆರುನೂರಾ ಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು ಪ್ರಚಂಡವೆಂಬ ಭುವನ. ಆ ಭುವನದೊಳು ಪ್ರಳಯಾಂತಕನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಮುನ್ನೂರಾ ಹತ್ತುಕೋಟಿ ಬ್ರಹ್ಮ ನಾರಾಯಣ ರುದ್ರರಿಹರು. ಮುನ್ನೂರಾ ಹತ್ತುಕೋಟಿ ಇಂದ್ರಚಂದ್ರಾದಿತ್ಯರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ