Index   ವಚನ - 97    Search  
 
ಅಂಥ ಬ್ರಹ್ಮಾಂಡವ ತೊಂಬತ್ತೈದುಸಾವಿರದ ಒಂಬೈನೂರ ನಲವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ರುದ್ರಕೋಟಿಯೆಂಬ ಭುವನ. ಆ ಭುವನದೊಳು ಕೋದಂಡನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನಾನೂರೆಪ್ಪತ್ತೈದುಕೋಟಿ ದೇವರ್ಕಳು ಮುನೀಂದ್ರರು ವೇದಪುರುಷರು ಇಂದ್ರ-ಚಂದ್ರಾದಿತ್ಯರು ನೋಡಾ. ನಾನೂರೆಪ್ಪತ್ತೈದುಕೋಟಿ ನಾರಾಯಣ ರುದ್ರ ಬ್ರಹ್ಮಾದಿಗಳಿಹರು ನೋಡಾ. ಅಪ್ರಮಾಣಕೂಡಲಸಂಗಮದೇವಾ.